Our Programmes

 

ನಮ್ಮ ಶಾಲಾ ಕಾರ್ಯಕ್ರಮ


ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ಕ್ಷೇತ್ರ ಭೇಟಿ ಕಾರ್ಯಕ್ರಮವೂ ಬಹು ಪ್ರಯೋಜನಕಾರಿ. ಈ ದಿಶೆಯಲ್ಲಿ ಮೈಸೂರಿನ, ಸರಗೂರಿನಲ್ಲಿರುವ ಎಸ್.ವಿ.ವೈ.ಎಂ. ಸಂಸ್ಥೆಯವರು ನಿರ್ಮಿಸಿರುವ ಸೈನ್ಸ್ ಪಾರ್ಕ್, ಆಸ್ಪತ್ರೆ ಮತ್ತು ರೇಡಿಯೋ ಸ್ಟೇಷನ್ ಗೆ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಕರೆದೋಯ್ದು ಅಲ್ಲಿ ಜರುಗುವ ಹಲವಾರು ಕಾರ್ಯಗಳ ಮತ್ತು ವಿದ್ಯಮಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಯಿತು.



ನಮ್ಮ ಶಾಲೆಯ ಪುಟ್ಟ ಕೈತೋಟ ಶಾಲೆಯ ಆವರಣದಲ್ಲಿ ವಿವಿಧ ಸೊಪ್ಪು ತರಕಾರಿಗಳನ್ನು ಬೆಳೆದು, ಶಾಲೆಯ ಬಿಸಿಯೂಟಕ್ಕೆ ಬಳಸಿಕೊಳ್ಳಲಾಗುತ್ತಿದೆ


ಸಮುದಾಯ ಸಹಭಾಗಿತ್ವ ಯೋಜನೆಯಡಿಯಲ್ಲಿ ನಂಜನಗೂಡಿನ ಟಿ.ವಿ.ಎಸ್. ಸಂಸ್ಥೆಯವರ ಸಹಕಾರದಿಂದ ಶಾಲೆಯಲ್ಲಿ 5.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಿಸಲಾಯಿತು.


ವಿಶೇಷ ದಾಖಲಾತಿ ಆಂದೋಲನವನ್ನು ಕೈಗೊಂಡು ಶಾಲೆಗೆ ಸಂಬಂಧಿಸಿದ ಸುಮುತ್ತಲಿನ ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲೆಗೆ ವಿದ್ಯಾರ್ಥಿಗಳ ದಾಕಲಾತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

ಮೈಸೂರಿನ ಸಿ.ಎಫ್.ಟಿ.ಆರ್.ಐ.ನಲ್ಲಿ 30/08/2023 & 01/09/2023 ದಿನಾಂಕಗಳಂದು ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಯೂಸುಫ್ ಹಮೀದ್ ಕೆಮಿಸ್ಟ್ರಿ ಕ್ಯಾಂಪ್ ನಲ್ಲಿ ನನ್ನ ಶಾಲೆಯ ಮಕ್ಕಳನ್ನು ನೋಂದಣಿ ಮಾಡಿಸಿ, 2 ದಿನಗಳ ಕಾಲ ಕ್ಯಾಂಪ್ ನಲ್ಲಿ ಭಾಗವಹಿಸುವಂತೆ ಪ್ರೇರಣೆಯನ್ನು ನೀಡಲಾಯಿತು.
 



NATIONAL SCIENCE DAY - 2023

09/12/2022 ರಂದು ಕೊಡಗು ಜಿಲ್ಲೆಯ ಹಲವಾರು ಶೈಕ್ಷಣಿಕ ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳನ್ನು ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಯಿತು. 


07/12/2022 ರಂದು ಮೈಸೂರು ಮೆಡಿಕಲ್ ಕಾಲೇಜಿಗೆ ಸ್ಥಳ ಭೇಟಿಯನ್ನು ಹಮ್ಮಿಕೊಂಡಿದ್ದು ನಮ್ಮ ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ಮಾನವನ ಅಂಗಾಂಗಶಾಸ್ತ್ರದ ಬಗ್ಗೆ ಅರಿವು ಮಾಡಿಕೊಂಡರು ಹಾಗೂ ವಿದ್ಯಾವರ್ಧಕ ಇಂಜಿನಿಯರಿಂಗ್ ಜಾಲೇಜಿಗೆ ಭೇಟಿ ಮಾಡಿಸಲಾಯಿತು. ಅತ್ಯಾಧುನಿಕ  ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿಕೊಂಡರು.


03/12/2022 ರಂದು ಸ್ಥಳ ಭೇಟಿ ಕಾರ್ಯಕ್ರಮದಡಿಯಲ್ಲಿ ಮಂಡ್ಯ ಜಿಲ್ಲೆಯ ವಿ.ಸಿ.ಫಾರ್ಮ್ ನಲ್ಲಿರುವ ಕೃಷಿ ವಿಶ್ವವಿದ್ಯಾನಿಲದಲ್ಲಿ ಜರುಗುತ್ತಿದ್ದ ಕೃಷಿ ಮೇಳವನ್ನು ವೀಕ್ಷಿಸಲೆಂದು ನಮ್ಮ ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು  ಕೃಷಿಯ ವಿವಿಧ ಆಯಾಮಗಳ ಬಗ್ಗೆ ಅರಿವು ಮಾಡಿಕೊಂಡರು. 



ದಿನಾಂಕ 03/12/2022 ರಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಡತಲೆ, ನಂಜನಗೂಡು ತಾ., ಮೈಸೂರು ಜಿಲ್ಲೆಯ ವತಿಯಿಂದ ವೈದ್ಯಾದಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ವೈದ್ಯರೊಡನೆ ಹಲವಾರು ವಿಷಯಗಳನ್ನು ಚರ್ಚಿಸಿ ತಮ್ಮ ಅನುಮಾನ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು.

ದಿನಾಂಕ 18/11/2022 ರಂದು SSLC ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಸಭೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು.

ದಿನಾಂಕ 14/11/2022 ರಂದು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಪರಿಸರ ಸಂರಕ್ಷಣೆ & ಸ್ವಚ್ಛ ಭಾರತ ಮಿಷನ್ ಸಂಬಂಧಿತ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.



ದಿನಾಂಕ 14/11/2022 ರಂದು  ಜಿಲ್ಲಾ ಪಂಚಾಯತ್, ಮೈಸೂರು ವತಿಯಿಂದ ಜಲ ಜೀವನ್ ಮಿಷನ್ & ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.


ದಿನಾಂಕ 09/10/2022 ರಂದು ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು. ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಹಲವಾರು ಮಾಹಿತಿಯನ್ನು ಶಿಕ್ಷಕರು ತಮ್ಮ ಭಾಷಣಗಳಲ್ಲಿ ವಿದ್ಯಾರ್ಥಿಗಳೊಡನೆ ಹಂಚಿಕೊಂಡರು.


ದಿನಾಂಕ 15/09/2022 ರಂದು ರಾಷ್ಟ್ರೀಯ ಅಭಿಯಂತರರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಮಟ್ಟದ ಅಂತರಶಾಲಾ ರಸಪ್ರಶ್ನೆ ಸ್ಪರ್ಧೆ, ಚರ್ಚಾ ಸ್ಪೆರ್ಧೆ ಮತ್ತು ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


ದಿನಾಂಕ 14/09/2022 ರಂದು ಶಿಕ್ಷಕ ದಿನಾಚರಣೆಯ ಪ್ರಯುಕ್ತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಗ್ಗೂಡಿ, ಶಿಕ್ಷಕರಿಗಾಗಿ ಹಲವಾರು ಮನೋರಂಜನಾತ್ಮಕ ಆಟಗಳನ್ನು ಏರ್ಪಡಿಸಿ ಶಾಲಾ ವಾತಾವರಣವನ್ನು ಉಲ್ಲಾಸ ಭರಿತರನ್ನಾಗಿ ಮಾಡಿದರು. ಆಯಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನಗನ್ನು ನೀಡಿದರು.

ದಿನಾಂಕ 06-08-2022 ರಂದು ನಮ್ಮ ಶಾಲೆಯಲ್ಲಿ ಆರೋಗ್ಯ ಇಲಾಖಾ ವತಿಯಿಂದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಕೈ ಯನ್ನು ತೊಳೆಯುವ ಅಭಿಯಾವನ್ನು ಹಮ್ಮಿಕೊಂಡು, ಶಾಲಾ ವಿದ್ಯಾರ್ಥಿಗಳಿಗೆ ಕೈಗಳನ್ನು ತೊಳೆಯುವ ವೈಜ್ಞಾಣಿಕ ವಿಧಾನವನ್ನು ಪ್ರಾತ್ಯಕ್ಷಿತೆಯ ಮೂಲಕ ಪ್ರದರ್ಶನ ಮಾಡಿದರು.



ದಿನಾಂಕ 01 ಮತ್ತು 02-08-2022 ರಂದು ನಮ್ಮ ಶಾಲೆಯಲ್ಲಿ  ಹೆಮ್ಮರಗಾಲ ವಲಯ ಮಟ್ಟದ ಕ್ರೀಡಾಕೂವನ್ನು ನಮ್ಮ ಶಾಲೆಯು ಸಂಘಟನಾ ಶಾಲೆಯಾಗಿ ಪಾತ್ರವಹಿಸಿ, ಯಾಶಸ್ವಿಯಾಗಿ ನಡೆಸಿಕೊಡಲಾಯಿತು. ವಲಯ ಮಟ್ಟದ 16 ಶಾಲೆಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ನಮ್ಮ ಶಾಲೆಯು ಬಾಲ್ ಬ್ಯಾಡ್ಮಿಂಟನ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು ಸಂತೋಷದಾಯಕ ವಿಷಯವಾಗಿತ್ತು.


ದಿನಾಂಕ   25-07-2022 ರಂದು ನಮ್ಮ ಶಾಲೆಯಲ್ಲಿ  ರಾಜಾಸ್ಥಾನದ ಮೂಲ ನಿವಾಸಿಯೊಬ್ಬರು ಬಟ್ಟೆಯ ಮೇಲೆ ಎಂಬ್ರಾಯಿಡರಿ ಮಾಡುವ ಕರಕುಶಲತೆಯನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆಯನ್ನು ಪ್ರದರ್ಶಿಸಿದರು.

ದಿನಾಂಕ 22/07/2022 ರಂದು ಪೈ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಪೈ ಬೆಲೆಯ ಮಹತ್ವವನ್ನು ತಿಳಿಸಿ, ದಿನಾಚರಣೆಯ ಅಂಗವಾಗಿ ಗಣಿತ ಕ್ವಿಜ್ ಕಾರ್ಯಕ್ರಮ ಮತ್ತು ಭಿತ್ತಿಪತ್ರ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ್ದರು.

ದಿನಾಂಕ 02/07/2022 ರಂದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ದೀರ್ಘ ಗೈರು ಹಾಜರಿಯಾಗುತ್ತಿರುವ ವಿದ್ಯಾರ್ಥಿಗಳ ಮನೆ-ಮನೆಗೆ ಶಾಲೆಯ ಶಿಕ್ಷಕರು ಖುದ್ದು ಭೇಟಿ ನೀಡಿ, ಪೋಷಕರ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಮರುಕಳುಹಿಸುವಂತೆ ತಿಳಿಸಲಾಯಿತು.

ದಿನಾಂಕ 21/06/2022 ರಂದು ಶಾಲೆಯಲ್ಲಿ ಅಂತರಾಷ್ಟ್ರೀಯ ಯೊಗ ದಿನಾಚರಣೆಯನ್ನು ಆಚರಿಸಲಾಯಿತು.

ದಿನಾಂಕ 06/06/2022 ರಂದು ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿವಿಧ ಬಗೆಯ ಸಸ್ಯಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಪರಿಸರ ಸಂರಕ್ಷಣೆಗಾಗಿ ಸೈಕಲ್ ಬಳಸಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

ದಿನಾಂಕ 23-05-2022 ರಂದು ನಮ್ಮ ಶಾಲೆಯಲ್ಲಿ ಶಾಲಾ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವಿವಿಧ ಬಗೆಯ 20ಕ್ಕೂ ಅಂಗಡಿಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು, ತಿಂಡಿ-ತಿನಿಸು, ತರಕಾರಿ, ಕಲಿಕಾ ಸಾಮಗ್ರಿಗಳು ಹೀಗೆ ಇನ್ನೂ ಹಲವಾರು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿದರು. ಸಾವಿರಾರು ರೂಪಾಯಿಗಳ ವಹಿವಾಟು ನಡೆದದ್ದು ಈ ಕಾರ್ಯಕ್ರಮಕ್ಕೆ ಸಂದ ಯಶಸ್ಸು ಎನ್ನಬಹುದು.




A new initiative in learning has been taken with the support of an NGO, Swamy Vivekananda Youth Movement (SVYM). A complete package of content, related to the syllabi of secondary school (8, 9 and 10th) - Science and Mathematics, developed by me with my friends has been digitalized with the technical support provided the SVYM. This package has been uploaded to the application and spread through the Wi-Fi router to the 20 tablets. These tablets are being given to the students as supplementary resources and followed after the regular class room teaching. Students engage themselves in learning with their own pace, learn happily and adopt the same in their free-time. Students are free to move with the tablet anywhere in the campus of the school within the range of about 10m.




No comments:

Post a Comment